ಅಲೇಸಿಯಾ ಫೀಲ್ಡ್‌ಬರ್ಗ್ ಕೆನಡಾದ ಪತ್ರಕರ್ತೆಯಾಗಿದ್ದು, ಪ್ರಸ್ತುತ ಸಿಟಿವಿ ಕ್ಯಾಲ್ಗರಿಯೊಂದಿಗೆ ವರದಿಗಾರರಾಗಿ ಮತ್ತು ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಟಿವಿ ವಿನ್ನಿಪೆಗ್‌ನಲ್ಲಿ ಕೆಲಸ ಮಾಡಿದ ನಂತರ ಅವರು ಕ್ಯಾಲ್ಗರಿಗೆ ಬಂದರು. ವಿನ್ನಿಪೆಗ್‌ಗೆ ಸೇರುವ ಮೊದಲು ಅವರು ಸಿಟಿವಿಯ ಲೆತ್‌ಬ್ರಿಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಿಟಿವಿ ಸೇರುವ ಮೊದಲು ಆಲ್ಬರ್ಟಾ ಟ್ರಾವೆಲ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. == ಆರಂಭಿಕ ಜೀವನ == ಫೀಲ್ಡ್‌ಬರ್ಗ್ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳ ಪದವಿಯನ್ನು ಪಡೆದಿದ್ದಾರೆ. ಸದರ್ನ್ ಆಲ್ಬರ್ಟಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬ್ರಾಡ್ಕಾಸ್ಟ್ ನ್ಯೂಸ್ ಪ್ರೋಗ್ರಾಂನಿಂದ ಪದವಿ ಪಡೆದಿದ್ದಾರೆ.ಫೀಲ್ಡ್ಬರ್ಗ್ ಅವರು ಆಗಸ್ಟ್ ೧೮, ೨೦೦೭ ರಂದು ಮಿಸ್ ಕೆನಡಾ ಇಂಟರ್ನ್ಯಾಷನಲ್ ೨೦೦೮ ಆಗಿ ಆಯ್ಕೆಯಾದರು. ಈ ಹಿಂದೆ ೨೦೦೭ ರ ಮಾರ್ಚ್ ೧೭ ರಂದು "ಮಿಸ್ ಕ್ಯಾಲ್ಗರಿ, ಎಬಿ" ಯಾಗಿ ಆಯ್ಕೆಯಾಗಿದ್ದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಟ್ವಿಟರ್ನಲ್ಲಿ ಅಲೆಸ್ಸಿಯಾ ಫೀಲ್ಡ್ಬರ್ಗ್